Pages

ಕ.ಸ.ಸ ನೌಕರರ ಸಂಘ==========================================

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೈರಾಜ್‌ಗೆ ಆತ್ಮೀಯ ಬೀಳ್ಕೊಡುಗೆ 


ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘ ದಿನಾಂಕ ೨೮-೦೫-೨೦೧೨ ಸೋಮವಾರ ಬೀಳ್ಕೊಡುಗೆ ಸಮಾರಂಭವನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್  ರವರಿಗೆ ಹಮ್ಮಿಕೊಳ್ಳಲಾಗಿತ್ತು

ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವುದರ ಜೊತೆಗೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಕೆಲಸವನ್ನು ಸಾಮೂಹಿಕವಾಗಿ ಮತ್ತು ಒಗ್ಗಟ್ಟಿನಿಂದ ಮಾಡಿದರೆ ಯಶಸ್ಸು ಸಾಧಿಸಬಹುದು ಎಂದರು.

ಸರ್ಕಾರಿ ವ್ಯವಸ್ಥೆ ಸರಿ ಇಲ್ಲ. ಖಾಸಗಿ ಕ್ಷೇತ್ರವೇ ಸರ್ಕಾರಿ ವ್ಯವಸ್ಥೆಗಿಂತ ಉತ್ತಮವಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಅದನ್ನು ಹೋಗಲಾಡಿಸುವ ರೀತಿಯಲ್ಲಿ ಸರ್ಕಾರಿ ನೌಕರರು ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೌಕರರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಹೆಚ್.ವಿ ರಾಮಚಂದ್ರ ರಾವ್, ಸರ್ಕಾರದ ಅಧೀನ ಕಾರ್ಯದರ್ಶಿ, ಶ್ರೀ ಕೆ.ಕೃಷ್ಣಮೂರ್ತಿ, ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ಶ್ರೀ ವಿಜಯಕುಮಾರ‍್, ಅಭಿವೃದ್ಧಿ ಆಯುಕ್ತರ ಅಪ್ತ  ಕಾರ್ಯದರ್ಶಿ ರವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್  ರವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೂ ಈ ಸಂದರ್ಭದಲ್ಲಿ ಸಚಿವಾಲಯ ಸೇವೆಯಲ್ಲಿದು ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾದ ಅಧಿಕಾರಿಗಳಿಗೆ  ಸಚಿವಾಲಯದ ನೌಕರರ ಸಂಘವು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ರವರಿಂದ ಸನ್ಮಾನ ಹಾಗೂ ಶುಭಹಾರೈಸಲಾಯಿತು.

ಅಭಿವೃದ್ಧಿ ಆಯುಕ್ತರಾದ ಶ್ರೀ ಸುಬೀರ್ ಹರಿಸಿಂಗ್,  ಶ್ರೀ  ಮಹಮ್ಮದ್ ಸನಾವುಲ್ಲ,  ಪ್ರಧಾನ ಕಾರ್ಯದರ್ಶಿಗಳು,  ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಮಹದೇವಯ್ಯ ಮಠಪತಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಶ್ರೀಮತಿ ಜ್ಯೋತಿ ಹೆಗಡೆ ಮತ್ತು ಶ್ರೀಮತಿ ಸುಜಯಾ ರವರಿಂದ  ಪ್ರಾರ್ಥನೆ

ಸುಗಮ ಸಂಗೀತ ಕಾರ್ಯಕ್ರಮ

ಸುಗಮ ಸಂಗೀತ ಕಾರ್ಯಕ್ರಮದ ರಸಾನುಬಾವದ ಕ್ಷಣ

ಶ್ರೀ ಹೆಚ್.ವಿ ರಾಮಚಂದ್ರ ರಾವ್, ಸರ್ಕಾರದ ಅಧೀನ ಕಾರ್ಯದರ್ಶಿ,
ಶ್ರೀ ಕೆ.ಕೃಷ್ಣಮೂರ್ತಿ, ಸರ್ಕಾರದ ಉಪ ಕಾರ್ಯದರ್ಶಿ  ಶ್ರೀ ವಿಜಯಕುಮಾರ‍್, ಅಭಿವೃದ್ಧಿ ಆಯುಕ್ತರ ಆಪ್ರ ಕಾರ್ಯದರ್ಶಿ

ಅಭಿವೃದ್ಧಿ ಆಯುಕ್ತರಾದ ಶ್ರೀ ಸುಬೀರ್ ಹರಿಸಿಂಗ್, ರವರಿಂದ ಕಿರುಹೊತ್ತಿಗೆ ಬಿಡುಗಡೆ


ಅಭಿವೃದ್ಧಿ ಆಯುಕ್ತರಾದ ಶ್ರೀ ಸುಬೀರ್ ಹರಿಸಿಂಗ್ ರವರಿಂದ ಭಾಷಣ

ಅಭಿವೃದ್ಧಿ ಆಯುಕ್ತರಾದ ಶ್ರೀ ಸುಬೀರ್ ಹರಿಸಿಂಗ್ ರವರಿಂದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸನ್ಮಾನ


ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ರವರಿಗೆ ಸನ್ಮಾನ

ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಮಹದೇವಯ್ಯ ಮಠಪತಿ ರವರಿಂದ  ಸನ್ಮಾನ

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ರವರಿಂದ ಅನಿಸಿಕೆಗಳು========================================================================
ಸಚಿವಾಲಯ ಸೇವೆಯಲ್ಲಿದು ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾದ ಅಧಿಕಾರಿಗಳಿಗೆ  ಸಚಿವಾಲಯದ ನೌಕರರ ಸಂಘವು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ರವರಿಂದ ಸನ್ಮಾನಿಸಲಾಯಿತು
========================================================================
ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಮಹದೇವಯ್ಯ ಮಠಪತಿ ಅಧ್ಯಕ್ಷರ ನುಡಿ
2 comments:

 1. what is Sectt Assn pl explain
  i am new to this blog

  ReplyDelete
  Replies
  1. The association which u have not known is about
   KARNATAKA GOVERNMENT SECRETARIAT EMPLOYEES ASSOCIATION, VIDHANA SOUDHA, BANGALORE

   Delete