Pages

Monday, 17 March 2014

"ನಮ್ಮ ಆಹಾರ ಪದ್ಧತಿ ಹೇಗಿರಬೇಕು? -ಉಪಯುಕ್ತ ಸಲಹೆಗಳು-"




"ನಮ್ಮ ಆಹಾರ ಪದ್ಧತಿ ಹೇಗಿರಬೇಕು? -ಉಪಯುಕ್ತ ಸಲಹೆಗಳು-"

    ನಮ್ಮ ಜೀವನ ಶೈಲಿ ಹೀಗಿರಬೇಕು, ಹಾಗಿರಬೇಕು ಎಂದು ಏನೇನೋ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತೇವೆ. ಆದರೆ ನಮ್ಮ ಆಹಾರ ಪದ್ಧತಿ ಹೇಗಿರಬೇಕು ಎಂಬುದರ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ನಮ್ಮ ಆಹಾರ ಪದ್ಧತಿಯಲ್ಲಿನ ತಪ್ಪು ನಡೆಗಳಿಂದಾಗಿಯೂ ನಾವು ಇಂದು ಹಲವಾರು ಕಾಯಲೆಗಳಿಂದ ಬಳಲುವಂತಾಗಿದೆ. ಬೆಂಗಳೂರು ಮಹಾನಗರದಲ್ಲಿ ಕಾಯಿಲೆ ಇಲ್ಲದೇ ಇರುವ ಒಬ್ಬನೇ ಒಬ್ಬ ವ್ಯಕ್ತಿಯೂ ಕೂಡ ಪ್ರಾಯಶ: ಸಿಗಲಿಕ್ಕಿಲ್ಲ. ಉದ್ಯೋಗದಲ್ಲಿರುವವರು ಹೆಚ್ಚು ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುವಂತಾಬೇಕೆಂದರೆ ಅವರ ಆರೋಗ್ಯ ಅತೀ ಹೆಚ್ಚಿನ ಪಾತ್ರವಹಿಸುತ್ತದೆ. ಸರ್ಕಾರದ ಕೇಂದ್ರಬಿಂದುವಾದ ಸಚಿವಾಲಯದಲ್ಲಿ ಅಧಿಕಾರಿ/ನೌಕರರು ಮಾನಸಿಕ ಒತ್ತಡಕ್ಕಿಂತಲೂ ಖಾಯಿಲೆಗಳಿಂದ ಬಳಲುತ್ತಿರುವುದಕ್ಕೆ ಕಾರಣವೇನಿರಬಹುದು ಎಂಬು ಸ್ವತ: ಸಚಿವಾಲಯದ ಅಧಿಕಾರಿ/ನೌಕರರಿಗೆ ತಿಳಿವಳಿಕೆ ಮೂಡಲಿ ಎಂಬ ಉದ್ದೇಶದಿಂದ ಸಚಿವಾಲಯ ನೌಕರರ ಸಂಘ ಮತ್ತು ಸಚಿವಾಲಯ ಗೃಹ ನಿರ್ಮಾಣ ಸಹಕಾರ ಸಂವು ಸಂಯುಕ್ತವಾಗಿ ದಿನಾಂಕ 17/03/2014 ರಂದು ಮಧ್ಯಾಹ್ನ 1.30 ಕ್ಕೆ "ನಾವೇನು ತಿನ್ನುತ್ತಿದ್ದೇವೆ ಹಾಗೂ ಆರೋಗ್ಯ  ಪದ್ಧತಿ" ಎಂಬ ವಿಷಯ ಕುರಿತು  ಮೈಸೂರಿನ ಹೆಸರಾಂತ ವಿಜ್ಞಾನಿ ಮತ್ತು ಹೋಮಿಯೋಪತಿ ತಜ್ಞರಾದ ಡಾ: ಖಾದರ್ ರವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.



     ಡಾ: ಖಾದರ್ ರವರು ಬೆಂಗಳೂರಿನ ಇಂಡಿಯನ ಇನಸ್ಟಿಟ್ಯೂಟ್ ಆಫ್ ಸೈನ್ಸ್ಸನಲ್ಲಿ ಸ್ಟಿರಾಯ್ಡ ವಿಷಯದಲ್ಲಿ ಸಂಶೋಧನೆ ನಡೆಸಿ ಪಿ.ಹೆಚ್.ಡಿ. ಪಡೆದವರು. ಮೈಸೂರಿನ ಆಹಾರ ಸಂಶೋಧನಾ ಕೇಂದ್ರದಲ್ಲಿ ಜೈವಿಕ ರಸಾಯನ ಶಾಸತ್ರ ಹಾಗೂ ಆಹಾರದ ಬಗ್ಗೆ ಹಾಗೂ ಅಮೇರಿಕಾದ ಹೆಸರಾಂತ ಕಂಪನಿಯಾದ " ಡು ಪಾಂಟ್ "ನಲ್ಲಿ ಹಿರಿಯ ವಿಜ್ನಾನಿಯಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದವರು. ನಮ್ಮ ಭಾರತೀಯ ಆಹಾರ ಪದ್ಧತಿಯಬಗ್ಗೆ ಅತೀವ ಹೆಮ್ಮೆ ಹೊಂದಿದ ಇವರು ತಮ್ಮ ಒಂದು ಗಂಟೆಯ ಅವಧಿಯಲ್ಲಿ ಸಚಿವಾಲಯದ ಅಧಿಕಾರಿ/ನೌಕರರಿಗೆ ಅನೇಕ ಮಹತ್ವದ ವಿಷಯಗಳನ್ನು ತಿಳಿಸಿದರು.  ದೇಸೀಯ ಆಹಾರದಲ್ಲಿ ಅಡಗಿರುವ ಔಷಧೀಯ ಗುಣಗಳನ್ನು ಉದಾಹರಣೆಯೊಂದಿಗಿ ವಿವರಿಸಿ ವಿದೇಶೀ ಆಹಾರ ಪದ್ಧತಿಯನ್ನು ಅನುಸರಿಸದಂತೆ ಕಿವಿಮಾತು ಹೇಳಿದರು. ಸಾಮಾನ್ಯ ಖಾಯಿಲೆಗಳಾದ, ವಾಯು ಪ್ರಕೋಪ, ಮಧುಮೇಹ ರೋಗ, ಮಲಬದ್ಧತೆ, ಇವುಗಳಿಗೆ ಅತ್ಯಂತ ಸರಳವಾದ ಆಹಾರ ಪದ್ಧತಿಯ ಗುಟ್ಟನ್ನು ಹೇಳಿಕೊಟ್ಟರು. ಸಚಿವಾಲಯದ ಅನೇಕ ಅಧಿಕಾರಿ ನೌಕರರು ತಮ್ಮ ಸಂದೇಹಗಳನ್ನು ಖಾದರ್ ರವರ ಉಪನ್ಯಾಸ ದಿಂದ ನಿವಾರಿಸಿಕೊಳ್ಳಲು ಸಾಧ್ಯವಾಯಿತು. ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಏರ್ಪಡಿಸಿದ ಸಚಿವಾಲಯದ ನೌಕರರ ಸಂಘ/ಸಚಿವಾಲಯ ಗೃಹ ನಿರ್ಮಾಣ  ಸಹಕಾರ ಸಂಧ ಪದಾಧಿಕಾರಿಗಳು ಅಭಿನಂದನಾರ್ಹರು.




Monday, 10 March 2014

Hyderabad Karnataka Article 371 Related Orders


ಅಧಿಸೂಚನೆ
ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಬಗ್ಗೆ -DPAR50ಹೈಕಕೋ2013



ಅಧಿಸೂಚನೆ
ಭಾರತ ಸಂವಿಧಾನದ ಅನುಚ್ಛೇದ 371(ಜೆ)ರ ತಿದ್ದುಪಡಿ ಆದೇಶದಂತೆ ಹೈ-ಕ ಪ್ರದೇಶದಲ್ಲಿನ ಎಲ್ಲಾ ಸರ್ಕಾರಿ ಇಲಾಖೆ/ನಿಗಮ/ಮಂಡಳಿ/ವಿಶ್ವವಿದ್ಯಾನಿಲಯಗಳ್ಲಿ ಎಲ್ಲಾ ವರ್ಗಗಳ ಹುದ್ದೆಗಳ ಭರ್ತಿ-
DPAR6plx2012P1dated 07-02-2014

ಸರ್ಕಾರಿ ಆದೇಶ
ಭಾರತ ಸಂವಿಧಾನದ ಅನುಚ್ಚೇದ371 ರ ತಿದ್ದುಪಡಿ ಆದೇಶದಂತೆ ಹೈ-ಕ ಪ್ರದೇಶದಲ್ಲಿರುವ ಎಲ್ಲಾ ಸರ್ಕಾರಿ ಇಲಾಖೆ/ನಿಗಮ/ ಮಂಡಳಿ/ವಿಶ್ವವಿದ್ಯಾನಿಲಯಗಳಲ್ಲಿನ ಎಲ್ಲಾ ವರ್ಗಗಳ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಬಗ್ಗೆ ಹಾಗೂ ತಿದ್ದುಪಡಿ ಕುರಿತು. -
DPAR6plx2012P1 dated 07-10-2103